ಪ್ರೀತಿಯಾ ಲೋಕದಲಿ
ಮಾತು ಮುತ್ತಿನ ಮಳಿಗೆ
ಹರ್ಷದಾ ಹೂ ಮಳೆಯು
ಪ್ರೀತಿಯುಕ್ಕುವ ಗಳಿಗೆ
ಆನಂದ ಅನುಬಂದ
ಮತ್ತದೇ ಸಂಬಂದ
ಪ್ರೀತಿಸುವ ವ್ಯಕ್ತಿಗೆ
ಇಲ್ಲ ಯಾರದೂ ಭಂದ
ಕಟ್ಟುಪಾಡುಗಳಿಲ್ಲ
ನೀತಿ ನಿಯಮಗಳಿಲ್ಲ
ಪ್ರೀತಿಯಾ ಲೋಕದಲಿ
ಕನಸುಗಳೇ ಎಲ್ಲ
ಕಣ್ನುನ್ಚಿನ ನಗುವು
ಹೃದಯದೊಳಗಿನ ಭಾವ
ಮಾತುಮಾತಲ್ಲೇ ನೀನು
ಪ್ರೀತಿಯುಕ್ಕಿಸುವ ಪರಿಯು
ಹುಚ್ಚು ಸಂತೋಷದ ಹೊಳೆಯು
ಪ್ರೀತಿಯಾ ಲೋಕದಲಿ
ಪ್ರೆಮಿಸುವಾ ವ್ಯಕ್ತಿಗೆ
ಮನದಾಳದ ಆಸೆಯ
ಪ್ರೆಯಸಿಯು ದೊರೆತರೆ
ಆ ಸ್ವರ್ಗ ಈ ಭುವಿಯ
ಪ್ರೀತಿಯ ಲೋಕದಲ್ಲೇ ತಾನೆ
Friday, June 13, 2008
Thursday, June 12, 2008
ಚುಟುಕ 2
೧)
ಜೀವನ ಎಲೆಯ
ಮೇಲಿನ ನೀರಿನ
ಹನಿ ಮುತ್ತಿನಂತೆ
ಹರಡುತ್ತಿದ್ದಂತೆ
ಕರಗಿ ಹೋಗುವುದು
ತಿಳಿಯದೆ ನಮಗೆ
೨)
ಮಿತ್ರನಿಗಿಂತ ಶತ್ರುವಿನ
ನೆನಪೇ ಹೆಚ್ಚು ಕಾಡುವುದು
ನೆಚ್ಚಿನ ಮಡದಿಗಿಂತ
ವಿಫಲ ಪ್ರೀಮದ
ಪ್ರೇಯಸಿಯ ನೆನಪೇ
ಹೆಚ್ಚು ಕಾಡುವುದು ಕಲಾಕ್ರಿಷ್ಣ
೩)
ಕನಸಿನ ಕುದುರೆಯೇರಿ
ಮನದಲ್ಲೇ ಸವಾರಿ ಮಾಡಿ
ಕನಸಲ್ಲೇ ಜಾರಿ ಬಿದ್ದು
ನೂವಾಯಿತೆಂದರೆ ಮನಕಾದ
ಗಾಯವ ತೋರಿಸುವುದು
ಸಾದ್ಯವೇ ಕಲಾಕ್ರಿಷ್ಣ
೪)
ಅವಳು ನನ್ನ ಪ್ರೀತಿಸಿಲ್ಲ
ಇದರಲ್ಲಿ ಅವಳದೆನು ತಪ್ಪು
ಹೇಳಲಿಲ್ಲವಲ್ಲ ಅವಳು
ಎಂದೂ ನೀನು ನನ್ನ ಒಪ್ಪು
ಜೀವನ ಎಲೆಯ
ಮೇಲಿನ ನೀರಿನ
ಹನಿ ಮುತ್ತಿನಂತೆ
ಹರಡುತ್ತಿದ್ದಂತೆ
ಕರಗಿ ಹೋಗುವುದು
ತಿಳಿಯದೆ ನಮಗೆ
೨)
ಮಿತ್ರನಿಗಿಂತ ಶತ್ರುವಿನ
ನೆನಪೇ ಹೆಚ್ಚು ಕಾಡುವುದು
ನೆಚ್ಚಿನ ಮಡದಿಗಿಂತ
ವಿಫಲ ಪ್ರೀಮದ
ಪ್ರೇಯಸಿಯ ನೆನಪೇ
ಹೆಚ್ಚು ಕಾಡುವುದು ಕಲಾಕ್ರಿಷ್ಣ
೩)
ಕನಸಿನ ಕುದುರೆಯೇರಿ
ಮನದಲ್ಲೇ ಸವಾರಿ ಮಾಡಿ
ಕನಸಲ್ಲೇ ಜಾರಿ ಬಿದ್ದು
ನೂವಾಯಿತೆಂದರೆ ಮನಕಾದ
ಗಾಯವ ತೋರಿಸುವುದು
ಸಾದ್ಯವೇ ಕಲಾಕ್ರಿಷ್ಣ
೪)
ಅವಳು ನನ್ನ ಪ್ರೀತಿಸಿಲ್ಲ
ಇದರಲ್ಲಿ ಅವಳದೆನು ತಪ್ಪು
ಹೇಳಲಿಲ್ಲವಲ್ಲ ಅವಳು
ಎಂದೂ ನೀನು ನನ್ನ ಒಪ್ಪು
೫) ಬಯಸದೆ ಬಂದವಳು
ಸಂಥಸವ ತಂದವಳು
ಕಹಿಯಾದ ಬದುಕಿನಲಿ
ಸಿಹಿಯನ್ನು ತಂದವಳು
ಕರೆದಾಗಲೆಲ್ಲ ಪ್ರೀತಿಯಿಂದ
ಓ ಎಂದವಳು ನನ್ನ ಅತಿಥಿ
ಎಲ್ಲಿ ಕಳೆದಿರುವೆ
ಜೀವನದ ಕತೆಯಲ್ಲಿ
ಮಿತ್ಯೆಯಾ ನೆರಳಲ್ಲಿ
ಮರುಬೂಮಿಯಾ ಮರಳಲ್ಲಿ
ಎಲ್ಲಿ ಕಳೆದಿರುವೆ
ಸಮುದ್ರದಾ ದಂಡೆಯಲಿ
ಮುಸ್ಸಂಜೆಯಾ ಸಮಯದಲಿ
ನನ್ನ ಜತೆ ನೀನಿರದೆ
ಎಲ್ಲಿ ಕಳೆದಿರುವೆ
ಆ ಮೊದಲ ಮಳೆಯಲ್ಲಿ
ನೆನೆದಾಗ ಬಾಳಲ್ಲಿ
ಜೋತೆಯಾಗುವೆ ಎಂದವಳು
ಎಲ್ಲಿ ಕಳೆದಿರುವೆ
ಗುಡುಗು ಮಿಂಚಿಗೆ ತಬ್ಬಿ
ಒಂದೇ ಸೂರಲಿ ಬಂದು ಬದುಕಿನಾ
ಬಯಲಲ್ಲಿ ಜೋತೆಯಾಗಿರುವೆ ಎಂದವಳು
ಎಲ್ಲಿ ಕಳೆದಿರುವೆ
ನನ್ನ ಹೃದಯದ ಪ್ರೀತಿ
ಮಾತು ಮುತ್ತುಗಳನ್ನು
ಜೋಪಾನವಾಗಿಡದೆ ಅದ
ಎಲ್ಲಿ ಕಳೆದಿರುವೆ
ನನ್ನ ಮನಸನು ನೀನು
ನನಗೆ ತಿಳಿಯದೆ ಕದ್ದು
ನಿನ್ನ ಹೃದಯವ ಕೇಳಿದಾಗ ಅದ
ಎಲ್ಲಿ ಕಳೆದಿರುವೆ
ಮನಸ್ಸಿಂದ ಮನಸ್ಸಿನಾ
ಮಹದಾಸೆಗೆ ನೀರೆರೆದು
ತಿಳಿದು ಬರಸೆಳೆದಾಗ ಮನಸ ನೀ
ಎಲ್ಲಿ ಕಳೆದಿರುವೆ
ಮಿತ್ಯೆಯಾ ನೆರಳಲ್ಲಿ
ಮರುಬೂಮಿಯಾ ಮರಳಲ್ಲಿ
ಎಲ್ಲಿ ಕಳೆದಿರುವೆ
ಸಮುದ್ರದಾ ದಂಡೆಯಲಿ
ಮುಸ್ಸಂಜೆಯಾ ಸಮಯದಲಿ
ನನ್ನ ಜತೆ ನೀನಿರದೆ
ಎಲ್ಲಿ ಕಳೆದಿರುವೆ
ಆ ಮೊದಲ ಮಳೆಯಲ್ಲಿ
ನೆನೆದಾಗ ಬಾಳಲ್ಲಿ
ಜೋತೆಯಾಗುವೆ ಎಂದವಳು
ಎಲ್ಲಿ ಕಳೆದಿರುವೆ
ಗುಡುಗು ಮಿಂಚಿಗೆ ತಬ್ಬಿ
ಒಂದೇ ಸೂರಲಿ ಬಂದು ಬದುಕಿನಾ
ಬಯಲಲ್ಲಿ ಜೋತೆಯಾಗಿರುವೆ ಎಂದವಳು
ಎಲ್ಲಿ ಕಳೆದಿರುವೆ
ನನ್ನ ಹೃದಯದ ಪ್ರೀತಿ
ಮಾತು ಮುತ್ತುಗಳನ್ನು
ಜೋಪಾನವಾಗಿಡದೆ ಅದ
ಎಲ್ಲಿ ಕಳೆದಿರುವೆ
ನನ್ನ ಮನಸನು ನೀನು
ನನಗೆ ತಿಳಿಯದೆ ಕದ್ದು
ನಿನ್ನ ಹೃದಯವ ಕೇಳಿದಾಗ ಅದ
ಎಲ್ಲಿ ಕಳೆದಿರುವೆ
ಮನಸ್ಸಿಂದ ಮನಸ್ಸಿನಾ
ಮಹದಾಸೆಗೆ ನೀರೆರೆದು
ತಿಳಿದು ಬರಸೆಳೆದಾಗ ಮನಸ ನೀ
ಎಲ್ಲಿ ಕಳೆದಿರುವೆ
Wednesday, June 11, 2008
ಮನಕೆ ಮನವಿ
ಸಾಯುವ ವರೆಗೆ ಬದುಕ ಬೇಕು
ಬದುಕಿ ಸಾದಿಸ ಬೇಕು
ಜೀವನ ಎಲೆಯ ಮೇಲಿನ
ನೀರಿನ ಹನಿ ಮುತ್ತಿನಂತೆ
ಭಯ ಬೀಳದಿರು ನೀನು
ಸಾಯುವೇನು ನಾನೆಂದು
ಹುಟ್ಟುವಾಗಲೇ ಅದನ್ನು
ಹೂತ್ತುತಂದಿಹೆವು
ಕಷ್ಟಗಳು ಬಂದಾಗ
ಓಡಿಹೊಗದಿರು ನೀನು
ಹೆದರಿ ಅದಕೆ
ನೋಡುವ ನೋಟದಲಿ
ಆಡುವ ಮಾತಿನಲಿ
ಕರುಣೆ ತುಂಬಿರು ನೀನು
ದೀನ ದಲಿತರಿಗೆ
ಜೀವನದ ತೆರೆಯಲಿ
ಮನಸ್ಸಿನ ಸುಳಿಯಲಿ
ನಿನ್ನ ನೀನು ಮರೆಯದಿರು
ನನ್ನ ಮನವೇ
ಬದುಕಿ ಸಾದಿಸ ಬೇಕು
ಜೀವನ ಎಲೆಯ ಮೇಲಿನ
ನೀರಿನ ಹನಿ ಮುತ್ತಿನಂತೆ
ಭಯ ಬೀಳದಿರು ನೀನು
ಸಾಯುವೇನು ನಾನೆಂದು
ಹುಟ್ಟುವಾಗಲೇ ಅದನ್ನು
ಹೂತ್ತುತಂದಿಹೆವು
ಕಷ್ಟಗಳು ಬಂದಾಗ
ಓಡಿಹೊಗದಿರು ನೀನು
ಹೆದರಿ ಅದಕೆ
ನೋಡುವ ನೋಟದಲಿ
ಆಡುವ ಮಾತಿನಲಿ
ಕರುಣೆ ತುಂಬಿರು ನೀನು
ದೀನ ದಲಿತರಿಗೆ
ಜೀವನದ ತೆರೆಯಲಿ
ಮನಸ್ಸಿನ ಸುಳಿಯಲಿ
ನಿನ್ನ ನೀನು ಮರೆಯದಿರು
ನನ್ನ ಮನವೇ
Tuesday, June 10, 2008
ಜೀವನದ ಆಟ
ಮೇಲೆ ಕುಳಿತಿರುವನೊಬ್ಬ
ಆಡುವಾ ಆಟದಲಿ
ಬದಲಾಗುತಿರುವುದೆಲ್ಲ
ಕ್ಷಣಕೊಮ್ಮೆ ದಿನಕೊಮ್ಮೆ
ಜೀವನ ಒಂದು ದೊಡ್ಡ ಪಾಠ
ಆಡಿ ತೋರಿಸುವ ಅವ
ದಿನಕೊಂದು ಆಟ
ಮಾಡಿದ ತಪ್ಪಿಗೆ ತಕ್ಕ
ಶಿಕ್ಷೆ ಯ ನೀಡಿ ಕಲಿಸುವುದು ಪಾಠ
ಆಡುತಾ ಆಟ
ಸಮಯದ ಓಟದಲಿ ನೆಡಬೇಕು ನೋಟ
ನಮ್ಮ ನಂತರವೂ ನಮ್ಮ ಹೆಸರು ಉಳಿಯುವಂತೆ
ಆಡಬೇಕು ಆಟ
ಆ ಚಂದ್ರ ಸುರ್ಯರಿಗೂಇದೆ
ಸಮಯದಾ ಮಿತಿ ನಾವು
ಆಡುವಾ ಆಟದಲಿ
ಬದಲಾಗುತಿರುವುದೆಲ್ಲ
ಕ್ಷಣಕೊಮ್ಮೆ ದಿನಕೊಮ್ಮೆ
ಜೀವನ ಒಂದು ದೊಡ್ಡ ಪಾಠ
ಆಡಿ ತೋರಿಸುವ ಅವ
ದಿನಕೊಂದು ಆಟ
ಮಾಡಿದ ತಪ್ಪಿಗೆ ತಕ್ಕ
ಶಿಕ್ಷೆ ಯ ನೀಡಿ ಕಲಿಸುವುದು ಪಾಠ
ಆಡುತಾ ಆಟ
ಸಮಯದ ಓಟದಲಿ ನೆಡಬೇಕು ನೋಟ
ನಮ್ಮ ನಂತರವೂ ನಮ್ಮ ಹೆಸರು ಉಳಿಯುವಂತೆ
ಆಡಬೇಕು ಆಟ
ಆ ಚಂದ್ರ ಸುರ್ಯರಿಗೂಇದೆ
ಸಮಯದಾ ಮಿತಿ ನಾವು
ಮನುಜರು ಮತ್ತೇನು ನಮ್ಮ ಗತಿ
ಕೊಡ ದೆಯೇ ಕಾಟ ಮಾಡಬೇಕು ಊಟ
ಇದೆ ಜೀವನ ನಮಗೆ ಕಲಿಸುವ ನೀತಿ ಪಾಠ
ತಾಯಿಯ ಋಣ ತೀರದು ತಂದೆಯ ಹಣ ಬಾರದು
ನಮ್ಮ ಜೀವನವು ಸಹ ಎಂದಿನಂತೆಯೆ ಇರದು
Monday, June 9, 2008
ಸಾವು
ಜೀವನದ ಹಾದಿಯಲಿ
ಬದುಕಿನಾ ಬೀದಿಯಲಿ
ಉಬ್ಬು ತಗ್ಗಿನ ದಾರಿಯಲಿ
ನಾನು ನಾನಾಗಿರದೆ
ನಡು ದಾರಿಯಲಿ ಬದುಕು
ಮುಗಿಯದಿರುವುದೇ ?
ಜೀವನದ ಕೊನೆಯೆಂದು
ಯಾವುದನು ಕರೆಯುವಿರಿ
ಸಾವು ಬದುಕಿನ ಆರಂಭವಲ್ಲದೆ
ಇನ್ನೇನು ?
ಬದುಕಿನಾ ಬೀದಿಯಲಿ
ಉಬ್ಬು ತಗ್ಗಿನ ದಾರಿಯಲಿ
ನಾನು ನಾನಾಗಿರದೆ
ನಡು ದಾರಿಯಲಿ ಬದುಕು
ಮುಗಿಯದಿರುವುದೇ ?
ಜೀವನದ ಕೊನೆಯೆಂದು
ಯಾವುದನು ಕರೆಯುವಿರಿ
ಸಾವು ಬದುಕಿನ ಆರಂಭವಲ್ಲದೆ
ಇನ್ನೇನು ?
Subscribe to:
Posts (Atom)
athi&ashu

mo
bee

me
joga

m
bekal fort
.jpg)
photo
