ಅವಳ ನೋಡುವ ಮೂದಲು
ನಾನು ಹೀಗಿರಲಿಲ್ಲ
ಒರಟನು ನಾನೆಂದು
ಹೇಳುತಿದ್ದರು ಎಲ್ಲ
ತುದಿ ಮೂಗಿನಲಿ ಕೋಪ
ಕೆಂಡದುಂಡೆಯ ರೂಪ
ಯಾವಾಗಲು ನನ್ನ ಸಿಡಿಮಿಡಿಯ ತಾಪ
ಯಾರೊಡನೆ ಬೆರೆತಿಲ್ಲ
ಮಾತಿಲ್ಲ ಕತೆಯಿಲ್ಲ
ನನ್ನ ಸುತ್ತಲೂ ನಾನು
ಕೋಟೆ ಕಟ್ಟಿದ್ದೆ
ಒಂಟಿತನದೊಂದಿಗೆ ಹೊಂದಿಕೊಂಡಿದ್ದೆ
ಅವಳ ನೋಡಿದ ಮೇಲೆ
ಅಹಂಭಾವ ಬಿಟ್ಟಿದೆ
ಪ್ರೀತಿಯನು ಕಂಡಿದ್ದೆ
ಶಾಂತಿ ಚಿತ್ತದಿಂದಿರಲು
ಪ್ರಯಾಸ ಪಟ್ಟಿದೆ
ಜನರೊಡನೆ ಬೇರೆತ್ತಿದ್ದೆ
ಒಂಟಿತನದ ಕೋಟೆಯನು
ನಾನು ತೋರೆದಿದ್ದೆ
ಅವಳೇ ನನ್ನ ಬದುಕೆಂದು
ನಾನು ತಿಳಿದಿದ್ದೆ ಕರೆದಿದ್ದೆ
ಅವಳನ್ನು ಮನದ ಮನೆಗೆ
ನೀಡಿದ್ದೆ ಜಾಗವನ್ನು ಹೃದಯದಾ ಒಳಗೆ
ಪ್ರೀತಿಯ ಮಾತಿನಿಂದ
ಸ್ನೇಹದಾ ನಡೆಯಿಂದ
ಗೆಲ್ಲ ಬಯಸಿದ್ದೆ
ನಾನು ಅವಳ ಮನಸ
ಹಾಡಿದ್ದೆ ಕುಣಿದಿದ್ದೆ
ಅವಳಿಗಾಗಿ ನಕ್ಕಿದ್ದೆ
ಅವಳು
ನನ್ನ ಬಿಟ್ಟು ಹೊರಟಾಗ
ನಾ ಮೊದಲ ಭಾರಿ ಅತ್ತಿದ್ದೆ
ಅವಳ ನೋಡುವ ಮೊದಲು
ನಾನು ಹೀಗಿರಲಿಲ್ಲ
Monday, August 25, 2008
Monday, August 18, 2008
ಮೈಲುಗಲ್ಲುಗಳು
ತಿರುತಿರುಗಿ ಬುವಿಯಲ್ಲಿ
ಮರೆಯಲ್ಲಿ ಮರುಗಿ
ಸಿಗಲ್ಲಿಲ್ಲ ಯಾರಿಗೂ
ಪ್ರೀತಿಯಾ ಬುರುಗಿ
ಕಥೆ ಹೇಳುವರು ಎಲ್ಲ
ಪ್ರೀತಿಯೆಂದರೆ ಬೆಲ್ಲ
ಪೂರ್ವ ಜನ್ಮದ ಪುಣ್ಯ
ಇಲ್ಲದೆ ಸಿಗದಲ್ಲ
ನಿಜ ಜೀವನದಿ ಇದು
ಯಾವುದೂ ನಿಜವಲ್ಲ
ಬದುಕೊಂದು ವ್ಯಾಪಾರ
ತಿಳಿದವನು ಬಲ್ಲ
ಕೊಟ್ಟು ಕೊಂಬ್ಧುದೆ ಎಲ್ಲ
ಕೊಡದೆಯೇ ಪಡೆದಿಲ್ಲ
ಜೀವನದ ಹಾದಿಯಲ್ಲಿ
ಮೈಳುಗಲ್ಲುಯ್ಗಲೇ ಎಲ್ಲ
ಮರೆಯಲ್ಲಿ ಮರುಗಿ
ಸಿಗಲ್ಲಿಲ್ಲ ಯಾರಿಗೂ
ಪ್ರೀತಿಯಾ ಬುರುಗಿ
ಕಥೆ ಹೇಳುವರು ಎಲ್ಲ
ಪ್ರೀತಿಯೆಂದರೆ ಬೆಲ್ಲ
ಪೂರ್ವ ಜನ್ಮದ ಪುಣ್ಯ
ಇಲ್ಲದೆ ಸಿಗದಲ್ಲ
ನಿಜ ಜೀವನದಿ ಇದು
ಯಾವುದೂ ನಿಜವಲ್ಲ
ಬದುಕೊಂದು ವ್ಯಾಪಾರ
ತಿಳಿದವನು ಬಲ್ಲ
ಕೊಟ್ಟು ಕೊಂಬ್ಧುದೆ ಎಲ್ಲ
ಕೊಡದೆಯೇ ಪಡೆದಿಲ್ಲ
ಜೀವನದ ಹಾದಿಯಲ್ಲಿ
ಮೈಳುಗಲ್ಲುಯ್ಗಲೇ ಎಲ್ಲ
Subscribe to:
Posts (Atom)
athi&ashu

mo
bee

me
joga

m
bekal fort
.jpg)
photo
