ನನ್ನ ಕವನಗಳಲ್ಲಿ
ಇಲ್ಲ ಕನಸು ಕಲ್ಪನೆಗಳು
ಕಟುವಾಸ್ತವದ
ಬದುಕಿನ ನಿತ್ಯ ಸತ್ಯಗಳು
ವಿಫಲ ಪ್ರೇಮದ
ವಿಪುಲ ನೆನಪುಗಳು
ನನ್ನ ಕವನಗಳ ವಸ್ತು
ಮರೆತು ಹೋದವು ಕೆಲವು
ಮರೆಯಲಾಗದ ಹಲವು
ಕಳೆದು ಹೋದ ದಿನಗಳ
ಮುತ್ತಿನಂಥ ಕ್ಷಣಗಳು
ನನ್ನ ಕವನಗಳು
ನನ್ನ ಬದುಕು
ನನ್ನ ವಿಪಲ ಪ್ರೇಮವ
ನನಪಿಸುವ ಸರಕು
Wednesday, September 24, 2008
ಮರೆಯ ಹೊರಟಿರುವೆ
ನನ್ನ ನೆನಪಿನಿಂದಲೇ ನಾನು ಅವಳ
ಮರೆಯಲೆಂದು ಹೊರಟಿಹೆನು
ಯಾರ ನೆನಪನು ಮರೆಯಹೊರಟು
ನನ್ನ ನಾನೇ ಮರೆತೆನೋ
ಅವಳ ನೆನಪ ಹೇಗೆ ಮರೆಯಲಿ
ಅವಳ ಮಾತು ನಗುವ ಪರಿಯ
ಎಲ್ಲರಲ್ಲೂ ಹುಡುಕುವೆ
ಕಣ್ಣಿಗೆ ಕಾಣದ ದೇವನಲ್ಲೂ
ಅವಳ ಕುರಿತೇ ಕೇಳುವೆ ನಾ
ಅವಳಿಗಾಗೆ ಬೇಡುವೆ
ಅವಳ ಪ್ರೀತಿಯ ಮರೆತೆನೆನ್ನುವೆ
ಮನದಲಿನ್ನು ಮರೆಯದೆ
ಅವಳ ಕಾಣದೆ ವರುಷವಾಯಿತು
ಎಂಬುದಿನ್ನೂ ನೆನಪಿದೆ
ಎನ್ನ ಜನುಮ ದಿನವ ಮರೆತರೂ
ಅವಳದಿನ್ನೂ ನೆನಪಿದೆ
ಅವಳ ನೋಡಿದ ಮೊದಲದಿನದ
ಪ್ರತಿಕ್ಷಣದ ಅರಿವೂ ಎನಗಿರೆ
ಹೇಗೆ ಮರೆಯಲಿ ಅವಳನು
ಏನ ಹೇಳಲಿ ಮನಸಿಗೆ
ಅವಳ ಪ್ರೀತಿಯ ಮರೆತೆನೆನ್ನುವೆ
ಮನದಲಿನ್ನು ಮರೆಯದೆ
ಮರೆಯಲೆಂದು ಹೊರಟಿಹೆನು
ಯಾರ ನೆನಪನು ಮರೆಯಹೊರಟು
ನನ್ನ ನಾನೇ ಮರೆತೆನೋ
ಅವಳ ನೆನಪ ಹೇಗೆ ಮರೆಯಲಿ
ಅವಳ ಮಾತು ನಗುವ ಪರಿಯ
ಎಲ್ಲರಲ್ಲೂ ಹುಡುಕುವೆ
ಕಣ್ಣಿಗೆ ಕಾಣದ ದೇವನಲ್ಲೂ
ಅವಳ ಕುರಿತೇ ಕೇಳುವೆ ನಾ
ಅವಳಿಗಾಗೆ ಬೇಡುವೆ
ಅವಳ ಪ್ರೀತಿಯ ಮರೆತೆನೆನ್ನುವೆ
ಮನದಲಿನ್ನು ಮರೆಯದೆ
ಅವಳ ಕಾಣದೆ ವರುಷವಾಯಿತು
ಎಂಬುದಿನ್ನೂ ನೆನಪಿದೆ
ಎನ್ನ ಜನುಮ ದಿನವ ಮರೆತರೂ
ಅವಳದಿನ್ನೂ ನೆನಪಿದೆ
ಅವಳ ನೋಡಿದ ಮೊದಲದಿನದ
ಪ್ರತಿಕ್ಷಣದ ಅರಿವೂ ಎನಗಿರೆ
ಹೇಗೆ ಮರೆಯಲಿ ಅವಳನು
ಏನ ಹೇಳಲಿ ಮನಸಿಗೆ
ಅವಳ ಪ್ರೀತಿಯ ಮರೆತೆನೆನ್ನುವೆ
ಮನದಲಿನ್ನು ಮರೆಯದೆ
Subscribe to:
Posts (Atom)
athi&ashu

mo
bee

me
joga

m
bekal fort
.jpg)
photo
